ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)

December 21, 2010

ಹೈಸ್ಕೂಲ್ ನಲ್ಲಿ ಓದುತ್ತಿದ್ದಾಗ, ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬರೆದ ಒಂದು ಪುಟ್ಟ ಚುಟುಕು. ಹಾ! ಅಂದ ಹಾಗೆ, "ಚುಟುಕುಗಳ ಬ್ರಹ್ಮ" ದಿನಕರ ದೇಸಾಯಿಯವರ ಚುಟುಕುಗಳೆಂದರೆ ನನಗೆ ತುಂಬಾ ಇಷ್ಟ. ನನ್ನ ಚುಟುಕುಗಳಿಗೆ ಸ್ಪೂರ್ತಿ ಅವರು. (ಬರೆಯುವ ಪ್ರಯತ್ನಕ್ಕೆ).ಶಾಲಾ ದಿನಗಳಲ್ಲಿ ಬರೆಯುತ್ತಿದ್ದ ಪ್ರತಿಯೊಂದು ಕಥೆ, ಪ್ರಬಂಧ, ಭಾಷಣಗಳಲ್ಲಿ ಕಡಿಮೆ ಎಂದರು ೩-೪ ದೇಸಾಯಿಯವರ ಚುಟುಕುಗಳು ಇರುತ್ತಿದ್ದವು. 


ವಿಪರ್ಯಾಸ
" ಓ ಪ್ರಕೃತಿಮಾತೆ! 
ನಿನ್ನುಳಿವೆ ನನ್ನುಳಿವು
ಎಂದುಕೊಳ್ಳುವ ಮಾನವ,
ಓ ಪ್ರಕೃತಿಮಾತೆ!
ನಿನ್ನಳಿವೆ ನನ್ನಳಿವು
ಎಂದೇಕೆ ಅಂದುಕೊಳ್ಳಲಾರ?? "

2 comments:

  1. ಚಂದದ ಬ್ಲಾಗು ವಿದ್ಯಾ.. Keep it up!
    ಬರೀತಾ ಇರು ಹಿಂಗೆ :-)

    ReplyDelete
  2. ಥ್ಯಾಂಕ್ಸ್ ಪೂರ್ಣಿಮಾ. ನಿಂದು ಬ್ಲಾಗ್ ಓದದೆ, ಚೊಲೋ ಇದ್ದು.

    ReplyDelete