ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)

December 31, 2010

ನನ್ನಿನಿಯ ನೀನು...!!

[ಯಾವಾಗಲೂ ಅಷ್ಟೇ, ಕವನ ಬರೆಯಬೇಕೆಂದುಕೊಂಡಾಗ ಮೊದಲು ನೆನಪಾಗುವುದು, ರಮೇಶ್, ಚಿರಾಗ್ ಇಲ್ಲಾ ಅಪ್ಪ-ಅಮ್ಮ. ಈಗಲೂ ಸಹ ಗೀಚಿರುವುದು ರಮೇಶ್ ಮೇಲೆ :)]


ಕೆನ್ನೆ ಕೆಂಪೇರಿತ್ತು,
ಸಂಜೆ ರಂಗೇರಿತ್ತು,
ನೀನಿತ್ತ ಹೂ ಮುತ್ತು,
ತರಿಸಿತ್ತು ಮತ್ತು!!


ಆ ನಿನ್ನ ಪ್ರೀತಿ,
ಆದರದ ರೀತಿ,
ಒಲುಮೆಯಾ ನೀತಿ,
ಬಾಳಿನಾ ಪ್ರಣತಿ!!


ಮುಗ್ಧವಾದ ಮನಸು,
ಮಗುವಿನಂತೆ ಎಳಸು,
ನನ್ನೊಳಗಿನ ಕನಸು
ನೀನಾದೆ ನನಸು!!


ಕಣ ಕಣದಲು ನೀನು,
ಜೀವನವೇ ಸಿಹಿಜೇನು ,
ನಾ ಭೂಮಿ ನಿ ಬಾನು,
ನಿನ್ನಗಲಿ ಇರುವೆನೇನು?

5 comments:

 1. ವಿದ್ಯಾ..
  ನಿಮ್ಮ ಮಗುವಿನ ನೆನಪಿನ ಮತ್ತು ಅದರ ಮುಗ್ಢತೆಯ ಅನಾವರಣದ ಕವನ ಚನ್ನಾಗಿದೆ..

  ReplyDelete
 2. ವಿದ್ಯಾ..

  ನನಸಾದ..
  ಪ್ರೇಮದ..
  ಸೊಗಸಾದ ಕವನ..

  ಇಷ್ಟವಾಯಿತು...

  ReplyDelete
 3. @ ಜಲನಯನ, ಇದು ಬರೆದಿದ್ದು ನನ್ನ ಯಜಮಾನರು, ರಮೇಶ್ ಬಗ್ಗೆ. ನೀವು ಹೇಳಿದ ಹಾಗೆ ನನ್ನ ಮಗ ಚಿರಾಗ್ ಗು , ರಮೇಶ್ ಗು ಹೆಚ್ಚು ವ್ಯತ್ಯಾಸ ಇಲ್ಲಾ, ರಮೇಶ್ ಮನಸು ಚಿಕ್ಕ ಮಕ್ಕಳ ಹಾಗೇ:)

  @ಪ್ರಕಾಶಣ್ಣ, ಧನ್ಯವಾದಗಳು :)

  ReplyDelete
 4. Hi Vidya,

  Kavana Tumba Chennagide. Antyapraasa chennagi moodi bandide :-)

  Bharath K

  ReplyDelete
 5. ಥ್ಯಾಂಕ್ಸ್ ಭರತ್!! ಎಲ್ಲೋ ಆಗ ಈಗ ಗೀಚ್ತಾ ಇರ್ತಿನಿ, ಇನ್ನು ಚೆನ್ನಾಗಿ ಬರೀಬೇಕು ಅನ್ನೋ ಆಸೆ ಇದೆ :)

  ReplyDelete