ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)

January 14, 2011

ಪುಟ್ಟನ ಪ್ರಶ್ನೆ -- 5


ಬೆಳಿಗ್ಗೆ ದೇವರಮನೆ ಮುಂದೆ ರಂಗೋಲಿ ಹಾಕಿದ್ದೆ. ಸಾಯಂಕಾಲ ದೀಪ ಹಚ್ಚಲು ಹೋದಾಗ ಪುಟ್ಟನೂ ಬಂದಾ (ಸಾಮಾನ್ಯವಾಗಿ ದಿನಾಲೂ ಅವನನ್ನು ಕರೆದುಕೊಂಡೇ ದೀಪ ಹಚ್ಚುತ್ತೇನೆ). ಎಂದಿನಂತೆ ಈವತ್ತೂ ರಂಗೋಲಿ ನೋಡಿ ಖುಷಿ ಆಯ್ತು ಅವನಿಗೆ. ತಕ್ಷಣವೇ ತೂರಿಬಂತು ಒಂದು ಪ್ರಶ್ನೆ, "ಅಮ್ಮಾ, 'q' ' q' ಅಂತಾ ಬರ್ದಿದ್ದೀಯಾ ??" ಅವನಿಗೆ ನನ್ನ ರಂಗೋಲಿ ಆ ಥರಾ ಕಂಡಿದ್ದರಲ್ಲಿ ಆಶ್ಚರ್ಯ ಇಲ್ಲಾ ಅಂತಾ ನನಗೂ ಆಮೇಲೆ ಅನಿಸಿತು, ನೀವೆನಂತಿರಾ?

2 comments:

  1. ವಿದ್ಯಾ,
    ರಂಗೋಲಿಯಲ್ಲಿ ಅಕ್ಷರ ಕಾಣುವ ಕಣ್ಣುಗಳು :)
    ಸೂಪರ್ !

    ReplyDelete
  2. ರ೦ಗೊಲಿಯಲ್ಲಿ 'q' ' q' ಕಂಡ ಕ೦ದನ ವಿಶಿಷ್ಟ ನೋಟಕ್ಕೆ ಅಭಿನ೦ದನೆಗಳು! ನನ್ನ `ಐ' ನ೦ತೆ `ಕೈ' ಎನ್ನುವ ಹಾಸ್ಯ ಬರಹದ ನೆನಪಾಯ್ತು. ಕನ್ನಡ ಕಲಿಸುವ ಪ್ರಯತ್ನದಲ್ಲಿ `ಐ' ಎನ್ನುವ ಅಕ್ಷರ ಒ೦ದೇ ಇರುವ೦ತೆ `ಕೈ' ಎನ್ನುವ ಅಕ್ಷರವೂ ಒ೦ದೇ ಇರುತ್ತದೆ, ಎ೦ದರೆ ಇಲ್ಲ eye -೨, ಹಾಗೇ `ಕೈ'ಗಳೂ ೨ ಎ೦ದು ಮಗು ವಾದ ಮಾಡುತ್ತದೆ!

    ReplyDelete