ನನ್ನ ಬಗ್ಗೆ...
- ವಿದ್ಯಾ ರಮೇಶ್
- ಬೆಂಗಳೂರು , ಕರ್ನಾಟಕ, India
- ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)
Showing posts with label ಹನಿಗವನ. Show all posts
Showing posts with label ಹನಿಗವನ. Show all posts
July 18, 2013
April 4, 2011
ಹನಿಗವನ
ನವ - ವಸಂತ
ಜೊತೆಯಲಿ ಕಳೆದವು
ವಸಂತಗಳೈದು,
ಆದರೂ ಬರಲಿರುವ
ವಸಂತ ಇನ್ನೂ ಹೊಸದರಂತೆ!!
ಪ್ರತಿಯೊಂದು ಹೆಜ್ಜೆಗೆ
ಗೆಜ್ಜೆಯ ದನಿಯಾಗಿ,
ಹೊರಟಿದೆ ಜೀವನ ರಥ
ಸುಗಮ ಪಥದಲ್ಲಿ!!
ಒಂದಾಗಿ ಕಂಡಂತ
ಸಾವಿರ ಕನಸುಗಳು,
ನನಸಾಗಿವೆ ಕೆಲವು
ಇನ್ನೂ ಉಳಿದಿವೆ ಹಲವು!!
ಮುಂದಡಿ ಇಟ್ಟಂತೆ
ನೆಲೆಸಲಿ ಸುಖ-ಶಾಂತಿ,
ಬೆಳಗಲಿ ಜೀವನ ಜ್ಯೋತಿ
ಆ ದೇವನ ಕ್ರಪೆಯಿಂದ,ಕಟಾಕ್ಷದಿಂದ!!
[ ಏಪ್ರಿಲ್ ೩, ೨೦೧೧ ಕ್ಕೆ ಜೊತೆಯಾಗಿ ೫ ವಸಂತಗಳನ್ನು ಪೂರೈಸಿದ ಸಮಯದಲ್ಲಿ ಗೀಚಿದ್ದು ]
ಜೊತೆಯಲಿ ಕಳೆದವು
ವಸಂತಗಳೈದು,
ಆದರೂ ಬರಲಿರುವ
ವಸಂತ ಇನ್ನೂ ಹೊಸದರಂತೆ!!
ಪ್ರತಿಯೊಂದು ಹೆಜ್ಜೆಗೆ
ಗೆಜ್ಜೆಯ ದನಿಯಾಗಿ,
ಹೊರಟಿದೆ ಜೀವನ ರಥ
ಸುಗಮ ಪಥದಲ್ಲಿ!!
ಒಂದಾಗಿ ಕಂಡಂತ
ಸಾವಿರ ಕನಸುಗಳು,
ನನಸಾಗಿವೆ ಕೆಲವು
ಇನ್ನೂ ಉಳಿದಿವೆ ಹಲವು!!
ಮುಂದಡಿ ಇಟ್ಟಂತೆ
ನೆಲೆಸಲಿ ಸುಖ-ಶಾಂತಿ,
ಬೆಳಗಲಿ ಜೀವನ ಜ್ಯೋತಿ
ಆ ದೇವನ ಕ್ರಪೆಯಿಂದ,ಕಟಾಕ್ಷದಿಂದ!!
[ ಏಪ್ರಿಲ್ ೩, ೨೦೧೧ ಕ್ಕೆ ಜೊತೆಯಾಗಿ ೫ ವಸಂತಗಳನ್ನು ಪೂರೈಸಿದ ಸಮಯದಲ್ಲಿ ಗೀಚಿದ್ದು ]
February 3, 2011
January 13, 2011
ಹನಿಗವನ
ನಾನು ಪಿ.ಯು.ಸಿ ಓದಿದ್ದು ಉಜಿರೆಯ SDM ಕಾಲೇಜಿನಲ್ಲಿ. ಯಲ್ಲಾಪುರದಿಂದ ಸುಮಾರು ೧೦ ಘಂಟೆಗಳ ಪ್ರಯಾಣ (KSRTC ಬಸ್ಸಿನಲ್ಲಿ ಎನ್ನುವುದು ಬೇರೆ ವಿಷಯ) ಆ ಸಮಯದಲ್ಲಿ ಬಸ್ಸಿನಲ್ಲಿ ಕುಳಿತು ಬರೆದ ಒಂದು ಚುಟುಕು.
ವಿಪರ್ಯಾಸ
" ಈ ಬಸ್ಸಿನ
ಪ್ರಯಾಣವೇ ಹೀಗೆ,
ಮುಗಿಯುವುದೇ ಇಲ್ಲ,
ಎಂದು ಗೊಣಗುತ್ತಿದ್ದವನ
ಬದುಕಿನ ಪ್ರಯಾಣವನ್ನೇ
ವಿಧಿ ಆಕ್ಸಿಡೆಂಟಿನ
ರೂಪದಲ್ಲಿ ಮುಗಿಸಬೇಕೇ ?!!"
December 31, 2010
ನನ್ನಿನಿಯ ನೀನು...!!
[ಯಾವಾಗಲೂ ಅಷ್ಟೇ, ಕವನ ಬರೆಯಬೇಕೆಂದುಕೊಂಡಾಗ ಮೊದಲು ನೆನಪಾಗುವುದು, ರಮೇಶ್, ಚಿರಾಗ್ ಇಲ್ಲಾ ಅಪ್ಪ-ಅಮ್ಮ. ಈಗಲೂ ಸಹ ಗೀಚಿರುವುದು ರಮೇಶ್ ಮೇಲೆ :)]
ಕೆನ್ನೆ ಕೆಂಪೇರಿತ್ತು,
ಸಂಜೆ ರಂಗೇರಿತ್ತು,
ನೀನಿತ್ತ ಹೂ ಮುತ್ತು,
ತರಿಸಿತ್ತು ಮತ್ತು!!
ಆ ನಿನ್ನ ಪ್ರೀತಿ,
ಆದರದ ರೀತಿ,
ಒಲುಮೆಯಾ ನೀತಿ,
ಬಾಳಿನಾ ಪ್ರಣತಿ!!
ಮುಗ್ಧವಾದ ಮನಸು,
ಮಗುವಿನಂತೆ ಎಳಸು,
ನನ್ನೊಳಗಿನ ಕನಸು
ನೀನಾದೆ ನನಸು!!
ಕಣ ಕಣದಲು ನೀನು,
ಜೀವನವೇ ಸಿಹಿಜೇನು ,
ನಾ ಭೂಮಿ ನಿ ಬಾನು,
ನಿನ್ನಗಲಿ ಇರುವೆನೇನು?
ಕೆನ್ನೆ ಕೆಂಪೇರಿತ್ತು,
ಸಂಜೆ ರಂಗೇರಿತ್ತು,
ನೀನಿತ್ತ ಹೂ ಮುತ್ತು,
ತರಿಸಿತ್ತು ಮತ್ತು!!
ಆ ನಿನ್ನ ಪ್ರೀತಿ,
ಆದರದ ರೀತಿ,
ಒಲುಮೆಯಾ ನೀತಿ,
ಬಾಳಿನಾ ಪ್ರಣತಿ!!
ಮುಗ್ಧವಾದ ಮನಸು,
ಮಗುವಿನಂತೆ ಎಳಸು,
ನನ್ನೊಳಗಿನ ಕನಸು
ನೀನಾದೆ ನನಸು!!
ಕಣ ಕಣದಲು ನೀನು,
ಜೀವನವೇ ಸಿಹಿಜೇನು ,
ನಾ ಭೂಮಿ ನಿ ಬಾನು,
ನಿನ್ನಗಲಿ ಇರುವೆನೇನು?
December 21, 2010
ಹೈಸ್ಕೂಲ್ ನಲ್ಲಿ ಓದುತ್ತಿದ್ದಾಗ, ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬರೆದ ಒಂದು ಪುಟ್ಟ ಚುಟುಕು. ಹಾ! ಅಂದ ಹಾಗೆ, "ಚುಟುಕುಗಳ ಬ್ರಹ್ಮ" ದಿನಕರ ದೇಸಾಯಿಯವರ ಚುಟುಕುಗಳೆಂದರೆ ನನಗೆ ತುಂಬಾ ಇಷ್ಟ. ನನ್ನ ಚುಟುಕುಗಳಿಗೆ ಸ್ಪೂರ್ತಿ ಅವರು. (ಬರೆಯುವ ಪ್ರಯತ್ನಕ್ಕೆ).ಶಾಲಾ ದಿನಗಳಲ್ಲಿ ಬರೆಯುತ್ತಿದ್ದ ಪ್ರತಿಯೊಂದು ಕಥೆ, ಪ್ರಬಂಧ, ಭಾಷಣಗಳಲ್ಲಿ ಕಡಿಮೆ ಎಂದರು ೩-೪ ದೇಸಾಯಿಯವರ ಚುಟುಕುಗಳು ಇರುತ್ತಿದ್ದವು.
ವಿಪರ್ಯಾಸ
" ಓ ಪ್ರಕೃತಿಮಾತೆ!
ನಿನ್ನುಳಿವೆ ನನ್ನುಳಿವು
ಎಂದುಕೊಳ್ಳುವ ಮಾನವ,
ಓ ಪ್ರಕೃತಿಮಾತೆ!
ನಿನ್ನಳಿವೆ ನನ್ನಳಿವು
ಎಂದೇಕೆ ಅಂದುಕೊಳ್ಳಲಾರ?? "
December 16, 2010
ಮೊದಲ ಹನಿ ಗವನ
ರಮ್ಯವಾದ ಚೈತ್ರದಲ್ಲಿ
ಮೇಘಗಳ ಸಾಲಿನಿಂದ
ಶ್ ಎಂದುಸುರುತ್ತಾ
ಬಂದವನೇ ನನ್ನಿನಿಯ "ರಮೇಶ್"
ಈಗ ಸುಮಾರು ೫ ವರ್ಷದ ಹಿಂದೆ, ನಿಶ್ಚಿತಾರ್ಥ ಕ್ಕೂ ಮೊದಲು ಬರೆದ ಹನಿ ಹನಿ ಕವನ!
ಅರ್ಪಣೆ -- ರಮೇಶ್ ಗೆ :)
ಮೇಘಗಳ ಸಾಲಿನಿಂದ
ಶ್ ಎಂದುಸುರುತ್ತಾ
ಬಂದವನೇ ನನ್ನಿನಿಯ "ರಮೇಶ್"
ಈಗ ಸುಮಾರು ೫ ವರ್ಷದ ಹಿಂದೆ, ನಿಶ್ಚಿತಾರ್ಥ ಕ್ಕೂ ಮೊದಲು ಬರೆದ ಹನಿ ಹನಿ ಕವನ!
ಅರ್ಪಣೆ -- ರಮೇಶ್ ಗೆ :)
Subscribe to:
Posts (Atom)

